ಹೆಬ್ಬಾಳ ಫ್ಲೈಓವರ್ ಮತ್ತು ಬಳ್ಳಾರಿ ರಸ್ತೆಯ ಟ್ರಾಫಿಕ್ ನರಕದಲ್ಲಿ ಗಂಟೆಗಟ್ಟಲೆ ಸಿಲುಕಿ, ಅದೆಷ್ಟೋ ಜನ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೋ ಲೆಕ್ಕವೇ ಇಲ್ಲ, ಈ ಟ್ರಾಫಿಕ್‌ ಮುಕ್ತಿಗೆ ಕೊನೆಗೂ ಶಾಶ್ವತ ಪರಿಹಾರ ಸಿಗುವ ಕಾಲ ಹತ್ತಿರ ಬಂದಿದೆ. ಹೌದು.. ಇಷ್ಟು ವರ್ಷ ಹಾಗೆ ಮಾತಿನಲ್ಲೇ ಉಳಿದುಕೊಂಡಿದ್ದ ಆ ಬಹುನಿರೀಕ್ಷಿತ ಮೇಖ್ರಿ ವೃತ್ತ - ಹೆಬ್ಬಾಳ ನೂತನ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಿದೆ.. ಬರೋಬ್ಬರಿ 725 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆಎತ್ತಲಿರುವ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಅರ್ಧ ರಸ್ತೆ ಮೇಲ್ಸೇತುವೆಯಾದರೆ, ಉಳಿದರ್ಧ ರಸ್ತೆ ಭೂಮಿಯ ಅಡಿಯಲ್ಲಿ 3 ಪಥಗಳ ಬೃಹತ್ ಸುರಂಗ ರಸ್ತೆಯಾಗಲಿದೆ.. ಹಾಗಾದ್ರೆ ಈ ಕಾರಿಡಾರ್‌ ಆರಂಭವಾಗೋದು ಯಾವಾಗಾ?, ಈ ಹೈಬ್ರಿಡ್ ಕಾರಿಡಾರ್‌ನ ಅಸಲಿ ನೀಲನಕ್ಷೆ ಹೇಗಿದೆ?, ಸುರಂಗ ರಸ್ತೆ ಎಲ್ಲಿಂದ ಎಲ್ಲಿಗೆ ಬರಲಿದೆ? ಬನ್ನಿ ಸಂಪೂರ್ಣ ಮಾಹಿತಿಯನ್ನು ನೋಡೋಣ..