ಪ್ರಿಯಾ ಕೊಟ್ಟ ಪ್ರೀತಿಯ ಸಂಕೇತ ಇವತ್ತಿಗೂ ಕಾಪಾಡಿದ್ದಾರೆ ಸುದೀಪ್‌! ಸುದೀಪ್ ಮತ್ತು ಪ್ರಿಯಾ ದಂಪತಿಯ ವಿವಾಹ ವಾರ್ಷಿಕೋತ್ಸವ. ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಇಂದು ಅಕ್ಟೋಬರ್ 18 ರಂದು ಕುಟುಂಬ ಆಚರಿಸಿದೆ. ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯಾ ಮತ್ತು ಸುದೀಪ್ 2001ರ ಅಕ್ಟೋಬರ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇಂದಿಗೆ ಸರಿಯಾಗಿ 25 ವರ್ಷಗಳು ತುಂಬಿವೆ. ಪ್ರಿಯಾ ಮೂಲತಃ ಕೇರಳ ರಾಜ್ಯದವರು. 2000 ಇಸಿವಿಯಲ್ಲಿ ಪ್ರಿಯಾ ಅವರು ಬೆಂಗಳೂರಿನ ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಸ್ಯಾಲರಿಯಲ್ಲಿ ಸುದೀಪ್‌ ಅವರ ಕೇರಿಯರ್‌ಗೂ ಹೆಲ್ಪ್‌ ಮಾಡಿದ್ದಾರೆ. ಆಗ ಅವರು ಬಳಸುತ್ತಿದ್ದ ಪ್ರೀತಿಯ ಸಂಕೇತವಾದ ಟುವ್ಹೀಲರ್‌ ಇವತ್ತಿಗೂ ಕಂಡಿಷನ್‌ನಲ್ಲಿ ಕಾಪಾಡಿಕೊಂಡು ಬಂದಿದ್ದಾರೆ ಸುದೀಪ್‌. ಮದುವೆಯಾದ ನಂತರ ಸಾಕಷ್ಟು ಏಳುಬೀಳು ಕಂಡರೂ ಪರಸ್ಪರ ಬಿಟ್ಟುಕೊಡದೇ 25 ವರ್ಷದ ತುಂಬು ದಾಂಪತ್ಯ ಕಳೆದಿದ್ದಾರೆ. ದಂಪತಿಗೆ 2004ರಲ್ಲಿ ಮುದ್ದಿನ ಮಗಳು ಸಾನ್ವಿ ಜನಿಸಿದರು.