ಹಾಸನಾಂಬೆ ಭಕ್ತರಿಗೆ ಗುಡ್ನ್ಯೂಸ್: ಕೇವಲ 60 ರೂಪಾಯಿಗೆ ಲಾಡು ಪ್ರಸಾದ ವಿತರಣೆ..!
ಧರ್ಮ ದರ್ಶನಕ್ಕೆ ಬರುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂಪಾಯಿಗೆ ವಿತರಿಸುವಂತೆ

ಹಾಸನ: ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸಿಹಿ ಸುದ್ದಿ ನೀಡಿದ್ದಾರೆ. ಧರ್ಮ ದರ್ಶನಕ್ಕೆ ಬರುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂಪಾಯಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಶುಕ್ರವಾರ ಬೆಳಗ್ಗೆ ಲಾಡು ಪ್ರಸಾದ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಧರ್ಮ ದರ್ಶನಕ್ಕೆ ಬರುವವರಲ್ಲಿ ಹೆಚ್ಚಿನವರು ಬಡ ಮತ್ತು ಸಾಮಾನ್ಯ ವರ್ಗದ ಭಕ್ತರಾಗಿರುತ್ತಾರೆ. ಅವರಿಗೆ 100 ರೂಪಾಯಿ ಲಾಡು ಖರೀದಿಸುವುದು ಹೊರೆಯಾಗಲಿದೆ. ಹೀಗಾಗಿ ಎಲ್ಲರಿಗೂ ಸಮಾನವಾಗಿ 60 ರೂಪಾಯಿಗೆ ಲಾಡು ವಿತರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.ಇಸ್ಕಾನ್ ಸಂಸ್ಥೆಯಿಂದ ಪ್ರತಿ ಲಾಡಿಗೆ 56 ರೂಪಾಯಿಯಂತೆ ಟೆಂಡರ್ ನೀಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಈ ಹಿಂದೆ 100 ರೂಪಾಯಿಗೆ ಲಾಡು ಮಾರಾಟ ಮಾಡಲು ನಿರ್ಧರಿಸಿತ್ತು. ಆದರೆ ಭಕ್ತರ ಹಿತದೃಷ್ಟಿಯಿಂದ 56 ರೂಪಾಯಿಗೆ ವಿತರಿಸಬೇಕೆಂಬುದು ತಮ್ಮ ಆಶಯವಾಗಿತ್ತು. ಚಿಲ್ಲರೆ ಸಮಸ್ಯೆ ಎದುರಾಗಬಹುದಾದ ಹಿನ್ನೆಲೆಯಲ್ಲಿ 60 ರೂಪಾಯಿ ನಿಗದಿಪಡಿಸಲು ಸಲಹೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.ಹಾಸನಾಂಬೆ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್!ಇನ್ನು ಹಾಸನಾಂಬೆ ದೇವಿಯ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರವಾಸೋದ್ಯಮ ಟೂರ್ ಪ್ಯಾಕೇಜ್ಗೂ ಸಚಿವ ಕೆ.ಎಂ. ಶಿವಲಿಂಗೇಗೌಡ ಚಾಲನೆ ನೀಡಿದ್ದಾರೆ. ನವೆಂಬರ್ 10ರವರೆಗೆ ಈ ವಿಶೇಷ ಪ್ಯಾಕೇಜ್ ನಡೆಯಲಿದ್ದು, ಟಿಕೆಟ್ ದರ 1,000 ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ ಹಾಸನಾಂಬೆ ದೇವಿಯ ವಿಶೇಷ ದರ್ಶನವೂ ಸೇರಿದೆ.ಹಾಸನ ಜಿಲ್ಲೆಯ ನೈಸರ್ಗಿಕ, ಧಾರ್ಮಿಕ, ಪಾರಂಪರಿಕ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನೂ ಒಳಗೊಂಡಂತೆ ಒಟ್ಟು 10 ಮಾರ್ಗಗಳಲ್ಲಿ ಪ್ರವಾಸ ಆಯೋಜಿಸಲಾಗಿದೆ.24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ!ಈ ಬಾರಿ ಭಕ್ತರ ಅನುಕೂಲಕ್ಕಾಗಿ ದಿನದ 24 ಗಂಟೆಯೂ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ವರ್ಷಗಳಲ್ಲಿ ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ದರ್ಶನ ಸ್ಥಗಿತಗೊಳ್ಳುತ್ತಿದ್ದರಿಂದ ಭಕ್ತರು ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ಈ ಸಮಸ್ಯೆ ತಪ್ಪಿಸಲು ಹೆಚ್ಚಿನ ಅರ್ಚಕರನ್ನು ನೇಮಕ ಮಾಡಿ ನಿರಂತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ.
ಸಂಬಂಧಿತ ಸುದ್ದಿಗಳು

ಮಂಡ್ಯದಲ್ಲಿ 100 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಗೆ ಸಿಎಂ ಸೂಚನೆ
ಮಂಡ್ಯ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ಸೌಲಭ್ಯ
◷ 01/11/2026
ದೆಹಲಿಯ ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: ನಾಲ್ವರು ಸಾವು, ಇಬ್ಬರಿಗೆ ಗಾಯ!
ದೆಹಲಿಯ ಮಂಗೋಲ್ಪುರಿ ಕೈಗಾರಿಕಾ ಪ್ರದೇಶದಲ್ಲಿರುವ ಶೂ..
◷ 01/11/2026
ಹಾಲಿನ ದರ ಏರಿಕೆ ಅನಿವಾರ್ಯ: ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿಕೆಶಿ!
ರಾಜ್ಯದಲ್ಲಿ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿರ್ಕಾರ
◷ 01/11/2026
17 ಖೈದಿಗಳು ಜೈಲಿನಿಂದ ಎಸ್ಕೇಪ್ ಕೇಸ್: ಅಧಿಕಾರಿಗಳ ಅಮಾನತು, ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ!
ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಿಂದ 17 ವಿಚಾರಣಾಧೀನ ಖೈದಿಗಳು ಪರಾರಿಯಾದ ಪ್ರಕರಣಕ್ಕೆ
◷ 01/11/2026
