ಹಾಲಿನ ದರ ಏರಿಕೆ ಅನಿವಾರ್ಯ: ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿಕೆಶಿ!
ರಾಜ್ಯದಲ್ಲಿ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿರ್ಕಾರ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1ರಿಂದ ಜಾರಿಗೆ ಬರುವಂತೆ ನಂದಿರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕ ಹೈನುಗಾರರ ಜೀವನೋಪಾಯ ರಕ್ಷಿಸುವುದು ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜಾನುವಾರುಗಳ ಮೇವು ಮತ್ತು ಹಿಂಡಿ ದರ ಏರಿಕೆ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚ ಹೆಚ್ಚಳ ಮತ್ತು ಬರಗಾಲದ ಪರಿಣಾಮವಾಗಿ ಹಾಲಿನ ಸಂಗ್ರಹಣೆಯಲ್ಲಿ ಕುಸಿತ ಉಂಟಾಗಿರುವುದು ದರ ಪರಿಷ್ಕರಣೆಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದಾರೆ.ಹಾಲಿನ ದರ ಹೆಚ್ಚಳದ 8 ರೂಪಾಯಿಗಳಲ್ಲಿ 7 ರೂಪಾಯಿ ನೇರವಾಗಿ ರೈತರಿಗೆ ತಲುಪಲಿದೆ. ಈ ಹಿಂದೆ ಪ್ರತಿ ಲೀಟರ್ಗೆ 35 ರೂಪಾಯಿ ಪಡೆಯುತ್ತಿದ್ದ ರೈತರಿಗೆ ಇದೀಗ 42 ರೂಪಾಯಿ ಸಿಗಲಿದೆ. ಸರ್ಕಾರದ 5 ರೂಪಾಯಿ ಪ್ರೋತ್ಸಾಹಧನ ಸೇರಿ ಒಟ್ಟು 47 ರೂಪಾಯಿ ದೊರೆಯಲಿದೆ.ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತರಿಗೆ ತಿಂಗಳಿಗೆ ಸುಮಾರು 2,100 ರೂಪಾಯಿ ಹೆಚ್ಚುವರಿ ಆದಾಯ ಸಿಗಲಿದೆ. ಈ ಪರಿಷ್ಕರಣೆಯಿಂದ ರಾಜ್ಯದ ಹೈನುಗಾರರಿಗೆ ವಾರ್ಷಿಕ 1,850ರಿಂದ 2,100 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ದೊರೆಯುವ ನಿರೀಕ್ಷೆಯಿದೆ.ರಾಜ್ಯದಲ್ಲಿ 28.84 ಲಕ್ಷ ಹೈನುಗಾರರಿದ್ದು, ಕೆಎಂಎಫ್ ಸದಸ್ಯರಲ್ಲಿ ಶೇ.67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ರೈತರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ನೀಡುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ತಿಳಿಸಿದ್ದಾರೆ.ಇನ್ನು ದರ ಏರಿಕೆಯ ಬಳಿಕವೂ ನಂದಿನಿ ಟೋನ್ಡ್ ಹಾಲಿನ ದರ 54 ರೂಪಾಯಿ ಹಾಗೂ ಶುಭಂ ಹಾಲಿನ ದರ 60 ರೂಪಾಯಿ ಇದ್ದು, ಇತರೆ ರಾಜ್ಯಗಳ ಪ್ರಮುಖ ಡೈರಿ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ಕಡಿಮೆಯಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಸಂಬಂಧಿತ ಸುದ್ದಿಗಳು

ಮಂಡ್ಯದಲ್ಲಿ 100 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಗೆ ಸಿಎಂ ಸೂಚನೆ
ಮಂಡ್ಯ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಸುಸಜ್ಜಿತ ಹೃದ್ರೋಗ ಚಿಕಿತ್ಸಾ ಸೌಲಭ್ಯ
◷ 01/11/2026
ಹಾಸನಾಂಬೆ ಭಕ್ತರಿಗೆ ಗುಡ್ನ್ಯೂಸ್: ಕೇವಲ 60 ರೂಪಾಯಿಗೆ ಲಾಡು ಪ್ರಸಾದ ವಿತರಣೆ..!
ಧರ್ಮ ದರ್ಶನಕ್ಕೆ ಬರುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂಪಾಯಿಗೆ ವಿತರಿಸುವಂತೆ
◷ 01/11/2026
ದೆಹಲಿಯ ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: ನಾಲ್ವರು ಸಾವು, ಇಬ್ಬರಿಗೆ ಗಾಯ!
ದೆಹಲಿಯ ಮಂಗೋಲ್ಪುರಿ ಕೈಗಾರಿಕಾ ಪ್ರದೇಶದಲ್ಲಿರುವ ಶೂ..
◷ 01/11/2026
17 ಖೈದಿಗಳು ಜೈಲಿನಿಂದ ಎಸ್ಕೇಪ್ ಕೇಸ್: ಅಧಿಕಾರಿಗಳ ಅಮಾನತು, ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ!
ತಮಿಳುನಾಡಿನ ಥೇಣಿ ಜಿಲ್ಲೆಯ ಉಪಜೈಲಿನಿಂದ 17 ವಿಚಾರಣಾಧೀನ ಖೈದಿಗಳು ಪರಾರಿಯಾದ ಪ್ರಕರಣಕ್ಕೆ
◷ 01/11/2026
